Friday, August 11, 2023

ಕನ್ನಡ ಎನೆ ಕುಣಿದಾಡುವುದೆನ್ನೆದೆ

 ಕನ್ನಡ ಎನೆ ಕುಣಿದಾಡುವುದೆನ್ನೆದೆ

ಕನ್ನಡ ಎನೆ ಕಿವಿ ನಿಮಿರುವುದು

ಕಾಮನ ಬಿಲ್ಲನು ಕಾಣುವ ಕವಿಯೊಳು

ತೆಕ್ಕನೆ ಮನ ಮೈಮರೆಯುವುದು


ಕನ್ನಡಾ… ಕನ್ನಡಾ… ಹಾ ಸವಿಗನ್ನಡ


ಕನ್ನಡದಲಿ ಹರಿ ಬರೆಯುವವನು

ಕನ್ನಡದಲಿ ಹರ ತಿರಿಯುವನು

ಕನ್ನಡದಲ್ಲಿಯೆ ಬಿನ್ನಹಗೈದೊಡೆ

ಹರಿ ವರಗಳ ಮಳೆ ಕರೆಯುವನು

ಹರ ಮುರಿಯದೆ ತಾ ಪೊರೆಯುವನು


ಬಾಳುವುದೇತಕೆ? ನುಡಿ, ಎಲೆ ಜೀವ

ಸಿರಿಗನ್ನಡದಲಿ ಕವಿತೆಯ ಹಾಡೆ

ಸಿರಿಗನ್ನಡದೇಳಿಗೆಯನು ನೋಡೆ

ಕನ್ನಡ ತಾಯಿಯ ಸೇವೆಯ ಮಾಡೆ

ಚಡ್ಡಿ ಗಿಡ್ಡಿ ಹಾಕಿಕೊಂಡು

 ಚಡ್ಡಿ ಗಿಡ್ಡಿ ಹಾಕಿಕೊಂಡು

ಕುದುರೆ ಮೇಲೆ ಕುಳಿತುಕೊಂಡು
ಲಗಾಮು ಹಿಡಿದುಕೊಂಡು
ಹೈ ಹೈ ಹೈ

ಲಂಗ ಗಿಂಗ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಅಣ್ಣನ ಸೊಂಟ ಹಿಡಿದುಕೊಂಡು
ಹೈ ಹೈ ಹೈ

ಕಂದು ಬಣ್ಣ ನಮ್ಮ ಕುದುರೆ
ಗಾಳಿ ಹಾಗೆ ಓಡೊ ಕುದುರೆ
ನಮ್ಮ ಕುದುರೆ ನಮ್ಮ ಕುದುರೆ
ಹೈ ಹೈ ಹೈ

ಕುದುರೆ ಮೇಲೆ ಕುಳಿತುಕೊಂಡು
ಅದ್ರ ಬೆನ್ನ ತಟ್ಟಿಕೊಂಡು
ಅಲ್ಲಿ ಇಲ್ಲಿ ಸುತ್ತಿಕೊಂಡು
ಹೈ ಹೈ ಹೈ

ಕುದುರೆ ಮೇಲೆ ಕುಳಿತುಕೊಂಡು
ಹಳ್ಳಾ ಗಿಳ್ಳಾ ಹಾರಿಕೊಂಡು
ಮಲ್ಲಿಗೆ ದಂಡು ಸೇರಿಕೊಂಡು
ಹೈ ಹೈ ಹೈ

ಕುದುರೆ ಮೈಯ್ಯ ಸವರಿ ತಟ್ಟಿ
ಹುರ್ಳಿ ಹಿರ್ಳಿ ತಂದುಕೊಟ್ಟು ಹೇ ಹೇ
ಸಾಕುವೆವು ನಮ್ಮ ತಟ್ಟು

ಕಣ್ಣ ಮುಚ್ಚೆ ಕಾಡಿಗೋಡೆ

 ಕಣ್ಣ ಮುಚ್ಚೆ ಕಾಡಿಗೋಡೆ

ಉದ್ದಿನ ಮೂಟೆ ಉರುಳೆ ಹೋಯಿತು

ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ

ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ

ಉಂಡಾಡಿ ಗುಂಡ

ಉಂಡಾಡಿ ಗುಂಡ

ಅಜ್ಜಿ ಮನೇಗೆ ಹೋದ

ಎಂಟು ಲಾಡು ತಿಂದ

ಹೊಟ್ಟೆ ನೋವು ಎಂದ

ಕೈ ಕಟ್ ಬಾಯ್ ಮುಚ್

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು

ಕವಿ – ಕುವೆಂಪು


ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು

ಎತ್ತಿಕೊಳಲು ಹೋದರದಕೆ ಕೋಪ ಬರುವುದು


ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು

ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು


ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು

ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು


ಪಾಪ ಅತ್ತರಮ್ಮ ತಾನೂ ಅತ್ತುಬಿಡುವಳು

“ಅಯ್ಯೋ ಪಾಪ” ಎಂದುಕೊಂಡು ಮುತ್ತು ಕೊಡುವಳು


ಪಾಪ ಪಟ್ಟು ಹಿಡಿದ ಹಟವು ಸಾರ್ಥಕವಾಯಿತು

ಕಿರಿಚಿ ಪರಚಿ ಅಳುವುದೆಲ್ಲ ಅರ್ಥವಾಯಿತು

ಬಣ್ಣದ ತಗಡಿನ ತುತ್ತೂರಿ

 ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡನು ಕಸ್ತೂರಿ

ಸ-ರಿ-ಗ-ಮ-ಪ-ದ-ನಿ-ಸ ಊದಿದನು
ಸ-ನಿ-ದ-ಪ-ಮ-ಗ-ರಿ-ಸ ಊದಿದನು

ತನಗೇ ತುತ್ತುರಿ ಇದೆಯೆಂದ;
ಬೇರಾರಿಗು ಅದು ಇಲ್ಲೆಂದ

ತುತ್ತೂರಿ ಊದುತ ಕೊಳದ ಬಳಿ;
ಕಸ್ತೂರಿ ನಡೆದನು ಸಂಜೆಯಲಿ;
ಜಂಭದ ಕೋಳಿಯ ರೀತಿಯಲಿ

ಜಾರಿತು ನೀರಿಗೆ ತುತ್ತೂರಿ;
ಗಂಟಲು ಕಟ್ಟಿತು ನೀರೂರಿ

ಸ-ರಿ-ಗ-ಮ ಊದಲು ನೋಡಿದನು;
ಗ-ಗ-ಗ-ಗ ಸದ್ದನು ಮಾಡಿದನು

ಬಣ್ಣವು ನೀರಿನ ಪಾಲಾಯ್ತು;
ಜಂಭದ ಕೋಳಿಗೆ ಗೋಳಾಯ್ತು

ಅಣ್ಣನು ಮಾಡಿದ ಗಾಳಿಪಟ

 ಅಣ್ಣನು ಮಾಡಿದ ಗಾಳಿಪಟ

ಬಣ್ಣದ ಹಾಳೆಯ ಗಾಳಿಪಟ


ನೀಲಿಯ ಬಾನಲಿ
ತೇಲುವ ಸುಂದರ
ಬಾಲಂಗೋಚಿಯ ನನ್ನ ಪಟ


ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ


ದಾರವ ಜಗ್ಗಿ
ದೂರದಿ ಬಗ್ಗಿ
ತಾರೆಯ ನಗಿಸುವ ನನ್ನ ಪಟ


ಉದ್ದದ ಬಾಲದ ಗಾಳಿಪಟ
ನನ್ನಯ ಮುದ್ದಿನ ಗಾಳಿಪಟ

ನಾಯಿಮರಿ ನಾಯಿಮರಿ

 ನಾಯಿಮರಿ ನಾಯಿಮರಿ

ತಿಂಡಿ ಬೇಕೆ ?
ತಿಂಡಿ ಬೇಕು ತೀರ್ಥ ಬೇಕು
ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ
ಏಕೆ ಬೇಕು ?
ತಿಂದು ಗಟ್ಟಿಯಾಗಿ ಮನೆಯ
ಕಾಯಬೇಕು

ನಾಯಿಮರಿ ಕಳ್ಳ ಬಂದರೇನು
ಮಾಡುವೆ ?
ಲೊಳ್ ಲೊಳ್ ಭೌ ಎಂದು
ಕೂಗಿಯಾಡುವೆ

ಜಾಣಮರಿ ನಾನು ಹೋಗಿ
ತಿಂಡಿ ತರುವೆನು
ತಾ ! ನಿನ್ನ ಮನೆಯ ನಾ
ಕಾಯುತಿರುವೆನು !

ಏರುತಿಹುದು ಹಾರುತಿಹುದು

 ಏರುತಿಹುದು ಹಾರುತಿಹುದು

ನೋಡು ನಮ್ಮ ಬಾವುಟ


ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟ ಪಟ

ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು

ಸತ್ಯ ಶಾಂತಿ ತ್ಯಾಗ ಮೂರ್ತಿ
ಗಾಂಧಿ ಹಿಡಿದ ಚರಕವು

ಇಂಥ ಧ್ವಜವು ನಮ್ಮ ಧ್ವಜವು
ನೋಡು ಹಾರುತಿರುವುದು

ಧ್ವಜದ ಶಕ್ತಿ ನಮ್ಮ ಭಕ್ತಿ
ನಾಡಗುಡಿಯ ಮೆರೆವುದು

ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ಣವಾಗಿದೆ

ನಮ್ಮ ನಾಡ ಗುಡಿಯ ಬಣ್ಣ
ನೋಡಿರಣ್ಣ ಹೇಗಿದೆ

                                            - ಕಯ್ಯಾರ ಕಿಞ್ಞಣ್ಣ ರೈ

ನಂಜನಗೂಡಿನ ರಸಬಾಳೆ

 ನಂಜನಗೂಡಿನ ರಸಬಾಳೆ

ತಂದಿಹೆ ಕೊಡಗಿನ ಕಿತ್ತೀಳೆ

ಬೀದರ ಜಿಲ್ಲೆಯ ಸೀಬೆಯ ಹಣ್ಣು

ಬೆಂಗಳೂರಿನ ಸೇಬಿನ ಹಣ್ಣು


ಕೊಳ್ಳಿರಿ ಹಿಗ್ಗನು ಹರಿಸುವವು

ಕಲ್ಲುಸಕ್ಕರೆಯ ಮರೆಸುವವು


ಕೊಳ್ಳಿರಿ ಮಧುಗಿರಿ ದಾಳಿಂಬೆ

ಬೆಳವಲ ಬಯಲಿನ ಸಿಹಿಲಿಂಬೆ

ಬೆಳಗಾವಿಯ ಸವಿ ಸಪೋಟ

ದೇವನಹಳ್ಳಿಯ ಚಕ್ಕೋ.  ತ


ನಾಲಿಗೆ ಬರವನು ಕಳೆಯುವವು 

ದೇಹದ ಬಲವನು ಬೆಳೆಸುವವು


ಗಂಜಾಮ್ ಅಂಜೀರ್ 

ತುಮಕೂರ್ ಹಲಸು 

ಧಾರವಾಡದ ಆಪೂಸು 

ಮಲೆನಾಡಿನ ಅನಾನಸು


ಸವಿಯಿರಿ ಬಗೆಬಗೆ ಹಣ್ಣುಗಳ

ಕನ್ನಡ ನಾಡಿನ ಹಣ್ಣುಗಳ


ಬೇಕೇ ಬೇಕೇ ತರಕಾರಿ

 ಬೇಕೇ ಬೇಕೇ ತರಕಾರಿ

ತರ ತರ ವಾಗಿಹ ತರಕಾರಿ

ಬೆರಳನು ಹೋಲುವ ಬೆಂಡೆಕಾಯಿ

ಹಾವನು ಹೋಲುವ ಪಡವಲಕಾಯಿ

ಕೋಲನು ಹೋಲುವ ನುಗ್ಗೆಕಾಯಿ

ಗೋಳಾಕಾರದ ನಿಂಬೆ ಕಾಯಿ 

ನೀರನು ಕುಡಿಸುವ ಮೆಣಸಿನ ಕಾಯಿ 

ಬಜ್ಜಿಗೆ ತಕ್ಕ ಬದನೆ ಕಾಯಿ 

ಒರಟು ಚರ್ಮದ ಹಾಗಲ ಕಾಯಿ 

ಗೆರೆಗಳು ಇರುವ ಹೀರೆ ಕಾಯಿ 

ಬೇಕೇ ಬೇಕೇ ತರಕಾರಿ 

ತರ ತರ ಊಟಕೆ ರುಚಿಕಾರಿ 

ಆಚೆ ಮನೆಯ ಸುಬ್ಬಮ್ಮ

 ಆಚೆ ಮನೆಯ ಸುಬ್ಬಮ್ಮನಿಗೆ

ಏಕಾದಶಿ ಉಪವಾಸ|

ಎಲ್ಲೊ ಸ್ವಲ್ಪ ತಿಂತಾರಷ್ಟೇ

ಉಪ್ಪಿಟ್ಟು ಅವಲಕ್ಕಿ ಪಾಯಸ||


ಮೂರೋ ನಾಲ್ಕೋ ಬಾಳೆಹಣ್ಣು

ಸ್ವಲ್ಪ ಚಕ್ಕುಲಿ ಕೋಡುಬಳೆ|

ಘಂಟೆಗೆ ಎರಡೆ ಸೀಬೆ ಹಣ್ಣು

ಆಗಾಗ ಒಂದೊಂದು ಕಿತ್ತಳೆ||


ಮಧ್ಯಾನಕೆಲ್ಲ ರವೆ ಉಂಡೆ

ಹುರುಳಿ ಕಾಳಿನ ಉಸಲಿ|

ಎಲ್ಲೊ ಸ್ವಲ್ಪ ಬಿಸಿ ಸಂಡಿಗೆ

ಐದೊ ಆರೋ ಇಡ್ಲಿ||


ರಾತ್ರಿ ಗೆ ಪಾಪ ಉಪ್ಪಿಟ್ಟೇ ಗತಿ

ಒಂದ್ ಲೋಟದ ತುಂಬಾ ಹಾಲು|

ಪಕ್ಕದ ಮನೆಯ ರಾಮೇ ಗೌಡರ

ಸೀಮೆ ಹಸುವಿನ ಹಾಲು ||

ಒಂದು ಕಾಡಿನ ಮಧ್ಯದೊಳಗೆ

ಒಂದು ಕಾಡಿನ ಮಧ್ಯದೊಳಗೆ

ಎರಡು ಮರಗಳ ನಡುವೆ ಮಲಗಿ

ಮೂರು ಕರಡಿಗಳಾಡುತಿದ್ದವು

ನಾಲ್ಕು ಮರಿಗಳ ಸೇರಿಸಿ

ಐದು ಜನರಾ ಬೇಟೆಗಾರರು

ಆರು ಬಲೆಗಳನೆಳೆದುಕೊಂಡು

ಏಳು ಕರಡಿಯ ಹಿಡಿದು , ನೋಡದೆ

ಎಂಟು ಹಿಡಿದೆವು ಎಂದರು

ಒಂಬತ್ತು ಎಂದನು ಅವರಲೊಬ್ಬ

ಹತ್ತು ಎಂದರು ಬೇರೆಯವರು

ಎಣಿಸಿನೊಡಿದರೆಳೆಯೆಳು ಇಲ್ಲಿಗೀ ಕಥೆ ಮುಗಿಯಿತು

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು

 ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು

ನಿದ್ದೆ ಬರುವಳು ಹೊದ್ದು ಮಲಗು ಮಗುವೆ

ಜೋ ಜೋಜೋ ಜೋ, ಜೋ ಜೋಜೋ ಜೋ||


ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು

ನಿದ್ದೆ ಬರುವಳು ಕದ್ದು ಮಲಗು ಮಗುವೆ

ಜೋ ಜೋಜೋ ಜೋ, ಜೋ ಜೋಜೋ ಜೋ||


ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೇ,

ಮಲಗು ತೊಟ್ಟಿಲ ಸಿರಿಯೆ, ದೇವರಂತೆ|

ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,

ಮಲಗು ಚಂದಿರನೂರ ಹೋಗುವೆಯಂತೆ||

ಮಲಗು ಚಂದಿರನೂರ ಹೋಗುವೆಯಂತೆ||

ಮಲಗು ಚಂದಿರನೂರ ಹೋಗುವೆಯಂತೆ||


ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ

ಚಂದಿರನ ತಂಗಿಯರು ನಿನ್ನ ಕರೆದು|

ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,

ವೀಣೆ ನುಡಿಸುವರಂತೆ, ಸುತ್ತ ನೆರೆದು||

ವೀಣೆ ನುಡಿಸುವರಂತೆ, ಸುತ್ತ ನೆರೆದು||


ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ

ಹಗಲು ಬರುವನು ಬೆಳ್ಳಿ ಮುಗಿಲ ನಡುವೆ|

ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ..

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ||

ಪಟ್ಟದಾನೆಯ ಮೇಲೆ ಪುಟ್ಟ ಮಗುವೆ||


ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

ನಿದ್ದೆ ಬರುವಳು ಹೊದ್ದು ಮಲಗು ಮಗುವೆ|

ಜೋ ಜೋಜೋ ಜೋ ಜೋ ಜೋಜೋ ಜೋ

ಜೋ ಜೋಜೋ ಜೋ ಜೋ ಜೋಜೋ ಜೋ||

ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ

ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ

ಚಂದ್ರ ಮೇಲೆ ಬಂದ

ಮಿನುಗು ತಾರೆ ಅಂದ

ನೋಡು ಎಂಥ ಚಂದ

ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ

ನನ್ನ ಪುಟ್ಟ ಕಂದಾ||ಬಾನ||


ನೀನಾಡೋ ಮಾತೆಲ್ಲ ಜೇನಿನಂತೆ

ನಗುವಾಗ ಮೊಗವೊಂದು ಹೂವಿನಂತೆ ||ನೀ||

ನೀನೊಂದು ಸಕ್ಕರೆಯ ಬೊಂಬೆಯಂತೆ

ಮಗುವೇ ನೀ ನನ್ನ ಪ್ರಾಣದಂತೆ, ನನ್ನ ಪ್ರಾಣದಂತೆ ||ಬಾ||


ಆ ದೇವ ನಮಗಾಗಿ ತಂದಾ ಸಿರಿಯೇ…

ಆ ದೇವ ನಮಗಾಗಿ ತಂದಾ ಸಿರಿಯೇ…

ಈ ಮನೆಯ ಸೌಭಾಗ್ಯ ನಿನ್ನ ನಗೆಯೇ…

ಅಳಲೇನು ಚಂದ ನನ್ನ ಪುಟ್ಟ ದೊರೆಯೇ..

ಹಾಯಾಗಿ ಮಲಗು ಜಾಣ ಮರಿಯೆ, ನನ್ನ ಜಾಣ ಮರಿಯೇ.. || ಬಾನ ….||

ಜೋ ಜೋ ಲಾಲಿ ನಾ ಹಾಡುವೆ

ಜೋ ಜೋ ಲಾಲಿ ನಾ ಹಾಡುವೆ

ಚಿನ್ನಾ ನಿನ್ನಾ ಮುದ್ದಾಡುವೆ..

ಹೂವಂತ ಕನಸು ತಾ ಮೂಡಿ ಬರಲಿ

ನಗುವ ಅಳುವ ಕಣ್ಣಲ್ಲಿ ಇಂದು…


ಜೋ ಜೋ ಲಾಲಿ ನಾ ಹಾಡುವೆ.. ಚಿನ್ನಾ ನಿನ್ನಾ ಮುದ್ದಾಡುವೆ…


ನಿದಿರಾದೇವಿ ಬಾ ಮೆಲ್ಲಗೆ ತಾರೆಯಿಂದಾ ಈ ಭೂಮಿಗೆ

ನಿದಿರಾದೇವಿ ಬಾ ಮೆಲ್ಲಗೆ ತಾರೆಯಿಂದಾ ಈ ಭೂಮಿಗೆ..

ಸಾವಿರ ರಂಗಿನ ಮಳೆಬಿಲ್ಲಿನ …

ಮಾಲೆಯ ಧರಿಸಿ ಬಾ ಇಲ್ಲಿಗೆ…

ಚಿನ್ನದ ತೇರಲಿ ಒಲವಿಂದ ಬಂದು

ತಾರೆ ಮುತ್ತು ಕಂದಂಗೆ ಇಂದು.. 


ಜೋಜೋ ಲಾಲಿ ನಾ ಹಾಡುವೆ…ಚಿನ್ನಾ ನಿನ್ನಾ ಮುದ್ದಾಡುವೆ..


ಚಿಪ್ಪಿ ಮಡಿಲ ಮುತ್ತಂತೆಯೇ

ದೀಪದೆ ಜ್ಯೋತಿ ಇರುವಂತೆಯೇ…..

ಚಿಪ್ಪಿ ಮಡಿಲ ಮುತ್ತಂತೆಯೇ

ದೀಪದೆ ಜ್ಯೋತಿ ಇರುವಂತೆಯೇ…..

ಕಿರಣದೆ ಕಾಂತಿ ಕುಳಿತಂತೆಯೇ

ಮೊಗ್ಗಲಿ ಸೌರಭ ಇರುವಂತೆಯೇ

ರಾತ್ರಿ ಸೆರಗು ಹಾಸಿರಲಿಂದು

ಮಲಗು ಮಮತೆ ಮಡಿಲಲ್ಲಿ ಬಂದು…


ಜೋ ಜೋ ಲಾಲಿ ನಾ ಹಾಡುವೆ…ಚಿನ್ನಾ ನಿನ್ನಾ ಮುದ್ದಾಡುವೆ..

Kinnara geetegaLu

 








ಅ ಆ ಇ ಈ ಕನ್ನಡದಾ ಅಕ್ಷರಮಾಲೆ

ಅಮ್ಮ ಎಂಬುದೇ ಕಂದನ ಕರುಳಿನ ಕರೆಯೋಲೆ ||


ಆ ಆ ಆಟ ಊಟ ಓಟಾ ಕನ್ನಡ ಒಂದನೇ ಪಾಠ

ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ ||


ಇ ಇ ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು

ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು ||


ಅ ಆ ಇ ಈ ಕನ್ನಡದಾ ಅಕ್ಷರಮಾಲೆ ಅಮ್ಮ ಎಂಬುದೇ ಕಂದನ ಕರುಳಿನ ಕರೆಯೋಲೆ||


ಉ ಉ ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ

ಊ ಊ ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ ||


ಋ ಋ ಎ ಏ ಐ ಭಾರತ ಮಾತೆಗೆ ಜೈ ||


ಒ ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು

ಓ ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು ||


ಅ ಆ ಇ ಈ ಕನ್ನಡದಾ ಅಕ್ಷರಮಾಲೆ ಅಮ್ಮ ಎಂಬುದೇ ಕಂದನ ಕರುಳಿನ ಕರೆಯೋಲೆ

ಔ ಅಂ ಅ: ಅಹ ಆಹಾ ಆಅಹ್ಹ ||


---- 
ಸಾ ರಿ ಗ ಮ ಪದ ನೀ…
ಸಾ ನೀ ದ ಪ ಮ ಗ ರೀ….

ಏಳು ಸ್ವರವು ಸೇರಿ ಸಂಗೀತ ವಾಯಿತು…
ಏಳು ಬಣ್ಣ ಸೇರಿ ಬಿಳಿಯ ಬಣ್ಣ ವಾಯಿತು…
ಏಳು ದಿನವೂ ಸೇರಿ ಒಂದು ವಾರವಾಯಿತು…
ಏಳು ತಾರೆ ಸಪ್ತ ಋಷಿಯ ಚಿನ್ಹೆಯಾಯಿತು…

ಕಡಲಿನಿಂದ ನೀರ ಆವಿ ಮೋಡವಾಯಿತು….
ಮೋಡ ಗಿರಿಗೆ ಮುತ್ತನಿಡೇ ಮಳೆಯು ಆಯಿತು…|| 
ಮಳೆಯು ನೆಲಕೆ ಬೀಳಲು ಬೆಳೆಯು ಆಯಿತು…
ಬೆಳೆದ ಕಾಳು ನಮಗೆ ತಾನು ಅನ್ನವಾಯಿತು|| 

ಬೀಜ ಮೊಳೆತು ಸಸಿಯು ಆಗಿ ಹೂವು ಬಿಟ್ಟಿತು….
ಹೂವಿನಿಂದ ಹೂವಿಗೆ ದುಂಬಿ ಹಾರಿತು.|| 
ದುಂಬಿಯಾಟ ಹೂವನು ಕಾಯಿ ಮಾಡಿತು…
ಕಾಯಿ ಮಾಗಿ, ಹಣ್ಣು ಆಗಿ ಬೀಜ ತಂದಿತು|| 

ಏಳು ಸ್ವರವು ಸೇರಿ ಸಂಗೀತ…….

---------

ಗೇರ್ ಗೇರ್ ಮಂಗಣ್ಣ
ಕಡ್ಲೆಕಾಯಿ ನುಂಗಣ್ಣ
ರೆಂಬೆಯಿಂದ ಕೊಂಬೆಗೆ
ಹೈ ಜಂಪ್ ಮಾಡು ಹನುಮಣ್ಣ||

-----

ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ
ಜಾರಿಬಿದ್ದು ಮಣ್ಣಿನಲ್ಲಿ (ನೆಲದ ಮೇಲೆ)
ಬಟ್ಟೆಯೆಲ್ಲ ಕೊಳೆ||

ಬಿಸಿಲು ಬಂತು ಬಿಸಿಲು
ಕೋಟು ಟೋಪಿ ತೆಗೆ
ಬಾವಿಯಿಂದ ನೀರು ಸೇದಿ
ಸೋಪು ಹಾಕಿ ಒಗೆ||

---- 

ಅಜ್ಜಂಗೆ ಬೇಕು ನಶ್ಯದ ಡಬ್ಬ
ಅಜ್ಜಿಗೆ ಬೇಕು ಕುಂಕುಮದ ಡಬ್ಬ
ಅಪ್ಪಂಗೆ ಬೇಕು ಶೇವಿಂಗ್ ಡಬ್ಬ
ಅಮ್ಮಂಗೆ ಬೇಕು ಪೌಡರ್ ಡಬ್ಬ
ನನಗೆ ಬೇಕು ಚಾಕಲೇಟ್ ಡಬ್ಬ 🙂 ||

---- 

ಸರ ಸರ ಕನ್ನಡ ಓದಲು ಬರೆಯಲು ಕಲಿಸಿದ ತಾಯಿಗೆ ನಮೋ ನಮೋ||
ಸ್ವರ ವ್ಯಂಜನಗಳ ಪದ್ದತಿ ಅರುಹಿದ ಶಾರದಂಬೆಗೆ ನಮೋ ನಮೋ||
ರಸವತ್ತಾದ ನುಡಿಗಳ ನುಡಿಸಿದ ವೀಣಾಪಾಣಿಗೆ ನಮೋ ನಮೋ||
ತಿಮಿರವ ಓಡಿಸಿ ಬೆಳಕನು ನೀಡಿದ ಜ್ಞಾನದೇವತೆಗೆ ನಮೋ ನಮೋ||

-----

ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೋಚಿಯ ನನ್ನ ಪಟ||

-------
ಬಾ ಬಾರೆ ಗುಬ್ಬಿ ಮರಿ ತಂದಿರುವೆ ಕಡ್ಲೆಪುರಿ
ಇಬ್ಬರು ತಿನ್ನೋಣ ಬಾ,
ಅವಲಕ್ಕಿ ಹುರಿಗಾಳು ತಂದಿರುವೆ ಸ್ವಲ್ಪ ತಾಳು ಇಬ್ಬರು ತಿನ್ನೋಣ ಬಾ
ಅಮ್ಮನ್ನ ಕೇಳ್ತೀನಿ ಕೊಡದಿದ್ರೆ ಅಳ್ತೀನಿ ಹೇಗಾದ್ರು ತರ್ತೀನಿ ಬಾ ||
----

ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು ||

ಇಪ್ಪತ್ತು ಹತ್ತು ಮೂವತ್ತು
ಕೈಯಲ್ಲಿ ಒಂದು ಕಲ್ಲಿತ್ತು||

ಮೂವತ್ತು ಹತ್ತು ನಲವತ್ತು
ಎದುರಿಗೆ ಮಾವಿನ ಮರವಿತ್ತು||

ನಲವತ್ತು ಹತ್ತು ಐವತ್ತು
ಮಾವಿನ ಮರದಲಿ ಕಾಯಿತ್ತು||

ಐವತ್ತು ಹತ್ತು ಅರವತ್ತು
ಕಲ್ಲನು ಬೀಸಿದ ಸಂಪತ್ತು||

ಅರವತ್ತು ಹತ್ತು ಎಪ್ಪತ್ತು
ಕಾಯಿಯು ತಪ ತಪ ಉದುರಿತ್ತು||

ಎಪ್ಪತ್ತು ಹತ್ತು ಎಂಬತ್ತು
ಮಾಲಿಯ ಕಂಡನು ಸಂಪತ್ತು||

ಎಂಬತ್ತು ಹತ್ತು ತೊಂಬತ್ತು
ಕಾಲುಗಳೆರಡು ನಡುಗಿತ್ತು||

ತೊಂಭತ್ತು ಹತ್ತು ನೂರು
ಮನೆಯನು ಸೇರಿದ ಸಂಪತ್ತು || 

---
ಕರಡಿ ಬೆಟ್ಟಕ್ಕೆ ಹೋಯಿತು…
ಕರಡಿ ಬೆಟ್ಟಕ್ಕೆ ಹೋಯಿತು…
ನೋಡಿತೆನದು…? ನೋಡಿತೆನದು….?
ಬೆಟ್ಟದ ಇನ್ನೊಂದು ಭಾಗ…
ಬೆಟ್ಟದ ಇನ್ನೊಂದು ಭಾಗ…
ಕರಡಿ ನೋಡಿತು…

ಹಲಸು ತಂದಿತು, ಜೇನು ಕಲಸಿತು,
ಮರಿಗಳಿಗೆ ತಿನ್ನಿಸಿ, ತಾನು ತಿಂದು ತೆಗಿತು…||

-----

ಒಂದು ಎರಡು ಬಾಳೆಲೆ ಹರಡು..
ಮೂರು ನಾಲ್ಕು ಅನ್ನ ಹಾಕು…
ಐದು ಆರು ಬೇಳೆ ಸಾರು…
ಏಳು ಎಂಟು ಪಲ್ಯಕೆ ದಂಟು…
ಒಂಬತ್ತು ಹತ್ತು ಎಲೆ ಮುದುರೆತ್ತು…
ಒಂದರಿಂದ ಹತ್ತು ಹೀಗಿತ್ತು…
ಊಟದ ಆಟವು ಮುಗಿದಿತ್ತು….||

-----
ಝಣ ಝಣ ಝಣ
ಜೇಬು ತುಂಬಾ ಹಣ
ಮೇಲಕೆತ್ತಿ ಬಿಡಲು ಸದ್ದು
ಟನ್ ಟನಾ  ಟನಾ…

ನದಿಯೊಂದು ಬಕ..
ಮುದುರಿಕೊಂಡು ಮುಖ
ಕಾಲನೆತ್ತಿ ಕುಣಿಯುತಿತ್ತು
ಥೈ ತಕ್ಕ ತಕ್ಕ…

ಸುತ್ತ ಹಸಿರು ವನ
ನಡುವೆ ಮೈವ ದನ
ಮರದ ಬಳಿ ಗೊಲ್ಲನುಲಿ
ತಾನ ನಾನ ನಾ….

-----

ಆನೆ ಬಂತೊಂದು ಆನೆ
ಯಾವೂರಾನೇ
ಬಿಜಾಪುರದ ಆನೆ
ಇಲ್ಲಿಗೆ ಯಾಕೆ ಬಂತು?
ದಾರಿ ತಪ್ಪಿ ಬಂತು
ಕೊಬ್ರಿ ಬೆಲ್ಲ ತಂತು…
ಮಕ್ಕಳಿಗೆಲ್ಲಾ ಹಂಚ್ತು..
ಆನೆ ಓಡಿ ಹೋಯ್ತು….
----

ತೋಟಕೆ ಹೋಗೋ ತಿಮ್ಮ
ತೋಳ ಬಂದೀತಮ್ಮ
ಹಸು ಮೈಸೋ ತಿಮ್ಮ
ಹಸು ಹಾದೀತಮ್ಮ

ಓಲೆ ಉರಿಸೋ ತಿಮ್ಮ
ಉರಿ ಸುಟ್ಟೀತಮ್ಮ
ಪಾಠ ಬರೆಯೋ ತಿಮ್ಮ
ಬಳಪ ಇಲ್ಲ ಅಮ್ಮ

ನೀರು ಸೇದೋ ತಿಮ್ಮ
ಕೈಯ್ಯಿ ನೋವು ಅಮ್ಮ
ಕಾವಲಿ ತಾರೋ ತಿಮ್ಮ
ಕಾಲು ನೋವು ಅಮ್ಮ

ಹೂವು ಬಿಡಿಸೊ ತಿಮ್ಮ
ಹಾವು ಬಂದೀತಮ್ಮ
ಊಟಕೆ ಬಾರೋ ತಿಮ್ಮ
ಓಡಿ ಬಂದೆನಮ್ಮ

ಮೂಡುವನು ರವಿ ಮೂಡುವನು

’ಉದಯರಾಗ’ -  ಪಂಜೆ ಮಂಗೇಶರಾಯರು   ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು...