ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ
ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ
ನೋಡು ಎಂಥ ಚಂದ
ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ
ನನ್ನ ಪುಟ್ಟ ಕಂದಾ||ಬಾನ||
ನೀನಾಡೋ ಮಾತೆಲ್ಲ ಜೇನಿನಂತೆ
ನಗುವಾಗ ಮೊಗವೊಂದು ಹೂವಿನಂತೆ ||ನೀ||
ನೀನೊಂದು ಸಕ್ಕರೆಯ ಬೊಂಬೆಯಂತೆ
ಮಗುವೇ ನೀ ನನ್ನ ಪ್ರಾಣದಂತೆ, ನನ್ನ ಪ್ರಾಣದಂತೆ ||ಬಾ||
ಆ ದೇವ ನಮಗಾಗಿ ತಂದಾ ಸಿರಿಯೇ…
ಆ ದೇವ ನಮಗಾಗಿ ತಂದಾ ಸಿರಿಯೇ…
ಈ ಮನೆಯ ಸೌಭಾಗ್ಯ ನಿನ್ನ ನಗೆಯೇ…
ಅಳಲೇನು ಚಂದ ನನ್ನ ಪುಟ್ಟ ದೊರೆಯೇ..
ಹಾಯಾಗಿ ಮಲಗು ಜಾಣ ಮರಿಯೆ, ನನ್ನ ಜಾಣ ಮರಿಯೇ.. || ಬಾನ ….||
No comments:
Post a Comment